"ಗೀತ" ಒಂದು ಪವಿತ್ರವಾದ ಸತ್ಯಗ್ರಂಥ, ಅದು ಆಧ್ಯಾತ್ಮ ಜ್ಞಾನದ ಕೋಶ, ಇಂದಿನ ದಿನಗಳಲ್ಲಿ ಇದನ್ನು ಹಿಂದೂಗಳ ಗ್ರಂಥವೆಂದು ಹೇಳಲಾಗುತ್ತಿದೆ. ವಾಸ್ತವವಾಗಿ ಪವಿತ್ರ ಗೀತೆಯು ವಿಶ್ವದ ಗ್ರಂಥವಾಗಿದೆ. ಇಂದಿಗೆ ಅಂದರೆ 2012 ರಿಂದ ಸುಮಾರು 5550 (ಐದು ಸಾವಿರದ ಐದುನೂರ ಐವತ್ತು ವರ್ಷಗಳ ಪೂರ್ವದಲ್ಲಿ ಮಹಾಭಾರತದ ಯುದ್ಧದ ಸಮಯದಲ್ಲಿ ಇದರ ಜನ್ಮವಾಯಿತು. ಆ ಸಮಯದಲ್ಲಿ ಯಾವುದೇ ಧರ್ಮವಿರಲಿಲ್ಲ. ಒಂದು ಸನಾತನ ಸಂಥವಿತ್ತು. ಅಂದರೆ ಮಾನವ ಧರ್ಮವಿತ್ತು ಕಬ್ಬಗಳು ಅಳಿಸಿ ಅದು ಪುಣ್ಯಾತ್ಮಗಳ ಮಸ್ತಿಷ್ಕವೆಂಬ ವಾಟ್ಸಾಪ್ (whatsApp) ಗೆ ಹೋಗಿ ತಲುಪುತ್ತದೆ. ಅದರ ನೆಟ್ವರ್ಕ್ ಸರಿಯಾಗಿರುತ್ತದೆ. ಈ ಮೊದಲು ಅದು ವ್ಯಾಸ ಮಹರ್ಷಿಗಳ (ಶ್ರೀ ಕೃಷ್ಣ ದೈಪಾಯನ) ಮಸ್ತಿಷ್ಕವೆಂಬ (whatsApp ಗೆ ಲೋಡ್ ಆಗಿತ್ತು. ಇದರಿಂದಲೇ ಶ್ರೀ ವೇದವ್ಯಾಸರು ಪವಿತ್ರ "ಶ್ರೀಮದ್ ಭಗವದ್ಗೀತೆ" ಯನ್ನು ಕಾಗದದ ಮೇಲೆ ಬರೆದರು ಅಥವಾ ತಾಳೆ ವೃಕ್ಷದ ಎಲೆಗಳ ಮೇಲೆ ಬರೆದರು. ಅದೇ ಇಂದು ನಮ್ಮ ಬಳಿ ಇರುವ ಪವಿತ್ರವಾದ ಗೀತ. ಗೀತಾಶಾಸ್ತ್ರದಲ್ಲಿ ಒಟ್ಟು 18 (ಹದಿನೆಂಟು) ಅಧ್ಯಾಯಗಳು ಮತ್ತು 700 (ಏಳು ನೂರು) ಶ್ಲೋಕಗಳಿವೆ. ನಾನು ಈ ಪವಿತ್ರ ಪುಸ್ತಕದಿಂದ ಆವಶ್ಯಕತೆಗೆ ಅನುಸಾರವಾಗಿ ವಿವರಣೆ ಪಡೆದು 'ಗೀತೆಯೇ ನಿನ್ನ ಜಾನ ಅಮೃತ' ಎಂಬ ಗ್ರಂಥವನ್ನು ರಚಿಸಿದ್ದೇನೆ.
ಕಾಡಿನಲ್ಲಿ ಗಿಡಮೂಲಿಕೆಗಳಿರುತ್ತವೆ. ಹೇಗೆ ವೈದ್ಯನು ಆ ಕಾಡಿನಿಂದ ಅವಶ್ಯಕವಾದ ಮೂಲಿಕೆಗಳನ್ನು ತಂದು, ಅದರಿಂದ ಜೀವದಾಯಕವಾದ ಔಷಧಿಯನ್ನು ತಯಾರಿಸಿದ ನಂತರವೂ ಕಾಡು ಉಳಿದಿರುತ್ತದೆಯೋ ಹಾಗೆ ಈ ಪುಸ್ತಕವಾದ 'ಗೀತೆಯೇ ನಿನ್ನ ಜ್ಞಾನ ಅಮೃತ' ಒಂದು ಔಷಧಿ ಎಂದು ತಿಳಿಯಿರಿ, ಇದನ್ನು ಓದಿ ಜ್ಞಾನದ ಗುಟುಕನ್ನು ಕುಡಿದು ನಿಮ್ಮ ಜನನ-ಮರಣವೆಂಬ ರೋಗವನ್ನು ನಿವಾರಿಸಿಕೊಳ್ಳಿ.
ಆಧ್ಯಾತ್ಮ ಜ್ಞಾನವಿಲ್ಲದೆ ಮನುಷ್ಯನ ಜೀವನ ಅಪೂರ್ಣವಾದುದು, ಯಾರ ಬಳಿಯಾದರೂ ಕೋಟಿಗಟ್ಟಲೆ ಸಂಪತ್ತಿದ್ದರೂ, ಅವನಿಗೆ ತನ್ನ ಜೀವನದಲ್ಲಿ ಏನೋ ಕೊರತೆ ಇರುವಂತೆ ಭಾಸವಾಗುತ್ತದೆ ಅದನ್ನು ನೀಗಿಸಲು ಮನುಷ್ಯನು ತೀರ್ಥಗಳಿಗೆ ಹೋಗುತ್ತಾನೆ. ಆ ಸಮಯದಲ್ಲಿ ಅವನಿಗೆ ಕೊಂಚ ಆರಾಮವೆನ್ನಿಸುತ್ತದೆ. ಆದರೆ ಇಡೀ ಜೀವನ ಸರಿಯಾಗುವುದಿಲ್ಲ ಹಾಗೂ ಇದರಿಂದ ಆತ್ಮ ಕಲ್ಯಾಣವಾಗುವುದಿಲ್ಲ. ಎರಡು-ಮೂರು ದಿನಗಳ ನಂತರ ಪುನಃ ಅದೇ ದಿನಚರಿ ಪ್ರಾರಂಭವಾಗುತ್ತದೆ. ಆಗ ಜೀವನ ಏನೋ ಅಪೂರ್ಣವೆನ್ನಿಸುತ್ತಿರುತ್ತದೆ. ಆ ಕೊರತೆಯು ಪರಮಾತ್ಮನ ಮೇಲಿಟ್ಟಿರುವ ಭಕ್ತಿಯದ್ದೇ ಆಗಿದೆ. ಅದನ್ನು ಪೂರ್ಣಗೊಳಿಸಲು ವಿಶ್ವದ ಧಾರ್ಮಿಕ ಮಾನವನು ತನ್ನ ಪರಂಪರಾಗತವಾದ ಸಾಧನೆ ಮಾಡುತ್ತಾನೆ ಹಾಗೊಂದು ವೇಳೆ ಆ ಸಾಧಕನ ಆ ಸಾಧನೆಯು ಶಾಸ್ತ್ರಗಳಿಗೆ ಅನುಗುಣವಾಗಿ ಇದ್ದದ್ದೇ ಆದರೆ ಅದರ ಪ್ರಯೋಜನವಾಗುತ್ತದೆ. ಹಾಗೊಂದು ವೇಳೆ ಶಾಸ್ತ್ರವಿಧಿಯನ್ನು ಬಿಟ್ಟು ಮನಸ್ಸಿಗೆ ಬಂದಂತೆ ಆಚರಣೆ ಅರ್ಥಾತ್ ಮನಸ್ಸಿಗೆ ಬಂದಂತೆ ಸಾಧನೆ ಮಾಡಿದರೆ ಈ ಗೀತೆಯ 16ನೇ ಅಧ್ಯಾಯದ 23-24ನೇ ಶ್ಲೋಕದ ಅನುಸಾರ ಎಲ್ಲವೂ ವ್ಯರ್ಥ, ಸಾಧಕನಿಗೂ ಸುಖ ಸಿಗುವುದಿಲ್ಲ, ಸಿದ್ಧಿಯೂ ಪ್ರಾಪ್ತವಾಗುವುದಿಲ್ಲ, ಮೋಕ್ಷವೂ ಲಭಿಸುವುದಿಲ್ಲ. ಅಂದರೆ ಅದು ವ್ಯರ್ಥ ಸಾಧನೆಯಾಗುತ್ತದೆ. ಆಸಕ್ತಿ ಹೊಂದಿರುವ ಕೆಲವರು ಗುರುವಿನಿಂದ ದೀಕ್ಷೆ ಪಡೆದು ಭಕ್ತಿಯಿಂದ ಇರುತ್ತಾರೆ. ಗುರು ಪೂರ್ಣವಾಗಿದ್ದರೆ ಪ್ರಯೋಜನವಾಗುವುದು, ಇಲ್ಲದಿದ್ದರೆ ಆ ಸಾಧನೆ ವ್ಯರ್ಥ.
'ಗೀತೆಯೇ ನಿನ್ನ ಜ್ಞಾನ ಅಮೃತ' ಎಂಬ ಈ ಪುಸ್ತಕದಿಂದ ನಿಮಗೆ ಪ್ರಾಮಾಣಿತ ಶಾಸ್ತವು ಯಾವುದು ? ಯಾವುದರ ಪ್ರಕಾರ ಸಾಧನೆ ಮಾಡಬೇಕು? ಶಾಸ್ತಾನುಸಾರ ಸಾಧನೆ ಯಾವುದು? ಆ ಸಾಧನೆಯನ್ನು ಮಾಡುವ ಬಗೆ ಹೇಗೆ? ಯಾವ ಮಹಾತ್ಮನಿಂದ ಪ್ರಾಪ್ತವಾಗುವುದು? ಪೂರ್ಣ ಗುರುವನ್ನು ಗುರುತಿಸುವುದು ಹೇಗೆ? ಮುಂತಾದವುಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಇವೆಲ್ಲವನ್ನೂ ಈ ಪುಸ್ತಕದಲ್ಲಿ ಓದುವಿರಿ. ವಿವಿಧ ಧರ್ಮಗಳಲ್ಲಿ ಹಂಚಿ ಹೋಗಿ ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಸಾಯುತ್ತಿರುವ ವಿಶ್ವದ ಮನುಷ್ಯರನ್ನೆಲ್ಲಾ ಈ ಪುಸ್ತಕವು ಒಂದುಗೂಡಿಸುವುದು, ಗೀತೆಯ ಶಾಸ್ತವು ಯಾವುದೇ ಧರ್ಮ ವಿಶೇಷದ್ದಲ್ಲ, ಯಾವುದೇ ಧರ್ಮವಿಲ್ಲದೆ ಇದ್ದ ಸಮಯದಲ್ಲಿ ಮಾನವನ ಕಲ್ಯಾಣಕ್ಕಾಗಿಇದನ್ನು ಪ್ರದಾನಿಸಲಾಗಿತ್ತು. ಕೇವಲ ಮಾನವ ಧರ್ಮವಾಗಿತ್ತು. ನನ್ನ ಘೋಷಣೆ ಇದಾಗಿದೆ.
ಜೀವವೇ ನಮ್ಮ ಜಾತಿ, ಮಾನವ ಧರ್ಮ ನಮ್ಮದು,
ಹಿಂದೂ, ಮುಸ್ಲಿಮ್, ಸಿಖ್, ಈಸಾಯಿ, ಯಾವ ಧರ್ಮವೂ ಬೇರೆಯಲ್ಲ.
ಬಾಬಾ ನಾನಕರ ಜನ್ಮವು ಪವಿತ್ರ ಹಿಂದೂ ಧರ್ಮದಲ್ಲಿ ಶ್ರೀ ಕಾಲೂರಾಮ್ ಮೆಹತಾ ಅವರ ಮನೆಯಲ್ಲಿ ಬಿತ್ತಿ (ಆರೋಡಾ) ಎಂಬ ಕುಲದಲ್ಲಿ ಆಗಿತ್ತು. ಶ್ರೀ ಬ್ರಜ್ ಲಾಲ್ ಪಾಂಡ ಅವರಿಂದ ನಾನಕ್ ದೇವರು ಗೀತೆಯ ಜ್ಞಾನವನ್ನು ಪಡೆದರು ಮತ್ತು ಅವರಿಂದ ತಿಳಿಸಲ್ಪಟ್ಟ ಭಕ್ತಿಯನ್ನು ಮಾಡುತ್ತಿದ್ದರು. ಶ್ರೀ ವಿಷ್ಣು ಮತ್ತು ಶ್ರೀ ಶಂಕರನನ್ನು ಪೂಜಿಸುತ್ತಿದ್ದರು. ಹಿಂದೂ ಧರ್ಮದಲ್ಲಿ ವರ್ತಮಾನದಲ್ಲಿ ಇರುವ ಬೇರೆ ದೇವತೆಗಳ ಭಕ್ತಿ ಮಾಡುತ್ತಿದ್ದರು. ಶ್ರೀ ನಾನಕರು ಸುಲ್ತಾನ್ಪುರ ನಗರದಲ್ಲಿ ಅಲ್ಲಿಯ ನವಾಬರ ಬಳಿ ಮೋದಿಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ನಗರದಿಂದ ಒಂದರ್ಧ ಕಿ.ಮೀ. ದೂರದಲ್ಲಿ ಬೇಈ ಎಂಬ ನದಿ ಹರಿಯುತ್ತಿತ್ತು. ಪ್ರತಿ ದಿನವೂ ನಾನಕ ಸಾಹೇಬರು ಆ ನದಿಯಲ್ಲಿ ಸ್ನಾನ ಮಾಡಲು ಹೋಗುತ್ತಿದ್ದರು. ಯಾರು ಧೃಡ ಭಕ್ತರೋ ಅಂತಹ ಒಳ್ಳೆಯ ಆತ್ಮಗಳಿಗೆ ಪರಮಾತ್ಮನು ದೊರೆಯುತ್ತಾನೆ. ಇದರ ಬಗ್ಗೆ ಈ ಪುಸ್ತಕದಲ್ಲಿ ಹೆಚ್ಚಿನ ಆಧಾರಗಳನ್ನು ನೀವು ಓದುವಿರಿ, ಅದೇ ರೀತಿ ಪರಮಾತ್ಮ ನಾನಕ ಸಾಹೇಬರಿಗೆ ಸಿಕ್ಕನು. ಅವರಿಗೆ ತತ್ವಜ್ಞಾನವನ್ನು ತಿಳಿಸಿದನು. ಶಾಸ್ತಾನುಸಾರವಾಗಿರುವ ಸತ್ಯ ಸಾಧನೆಯ ಜ್ಞಾನವನ್ನು ತಿಳಿಸಿದನು. ಶ್ರೀ ನಾನಕ ದೇವರ ಸಂತೃಪ್ತಿಗಾಗಿ ಅವರನ್ನು ತನ್ನ ಜೊತೆ ಮೇಲಿರುವ ತನ್ನ ಶಾಶ್ವತ ಸ್ಥಾನ ಅರ್ಥಾತ್ ಸತ್ಯಖಂಡಕ್ಕೆ ಕರೆದುಕೊಂಡು ಹೋದನು, ಸರ್ವ ಬ್ರಹ್ಮಾಂಡಗಳಲ್ಲಿ ಸುತ್ತಾಡಿಸಿ ನಿಜವಾದ ಭಕ್ತಿ ನಿಧಿಯನ್ನು ತಿಳಿಸಿ 'ಸನಾತನ ಭಕ್ತಿ'ಯನ್ನು ಪುನಃ ಸ್ಥಾಪಿಸಲು ಆದೇಶವನ್ನಿತ್ತರು. ಮೂರು ದಿನಗಳ ನಂತರ ಶ್ರೀ ನಾನಕರನ್ನು ಮತ್ತೆ ಭೂಮಿಗೆ ತಂದು ಬಿಟ್ಟನು. ಇದಾದ ನಂತರ ಶ್ರೀ ನಾನಕರು ಹಿಂದೂ ಧರ್ಮದಲ್ಲಿ ಪ್ರಚಲಿತವಾಗಿದ್ದ ಹಾಗೂ ಮನಸ್ಸಿಗೆ ಬಂದ ಹಾಗೆ ಇದ್ದ ಆಚರಣೆಯನ್ನು ನಿಲ್ಲಿಸಿ ಗೀತ (ಸಪ್ತಶ್ಲೋಕೀ ಗೀತೆ)ಯ ಶಾಸ್ತ್ರ ಅನುಸಾರ ಸಾಧನೆಯ ಪ್ರಚಾರ ಮಾಡಿದರು, ಅಂದರೆ ನಿಜವಾದ ಭಕ್ತಿಯ ಪ್ರಚಾರ ಮಾಡಿದರು.
ಪರಮಾತ್ಮನ ಸತ್ಯ ಸಾಧನೆಯನ್ನು ಮಾಡಲು ಮೊಟ್ಟಮೊದಲು 'ಗುರು' ಇರುವುದು ಅತಿ ಅವಶ್ಯಕವಾಗಿದೆ. ಇದರ ಪಾಲನೆಯನ್ನು ಮಾಡುತ್ತಾ ಪ್ರೀ ನಾನಕರು ಶಿಷ್ಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದರು, ಸ್ವಯಂ ಅವರೇ ಗುರುವಿನ ಪದವಿಯಲ್ಲಿ ವಿರಾಜಮಾನರಾಗಿದ್ದರು. ಶ್ರೀ ನಾನು ಶಿಷ್ಯರನ್ನು (ಪಂಚಾಬಿ ಭಾಷೆಯಲ್ಲಿ) ಸಿಬ್ಬರೆಂದು ಕರೆಯುತ್ತಾರೆ. ಇದೇ ಕಾರಣದಿಂದ ಅದರೆ ಪ್ರತ್ಯೇಕವಾದ ಅಸ್ತಿತ್ವ ಪ್ರಾರಂಭವಾಯಿತು. ವರ್ತಮಾನದಲ್ಲಿ ಆ ಅನುಯಾಯಿಗಳ ಸಮೂಹನ ಧರ್ಮದ ರೂಪವನ್ನು ಧಾರಣೆ ಮಾಡಿತು. ನಂತರದಲ್ಲಿ ಹಿಂದೂ ಮತ್ತು ಸಿಬ್ಬರು ಪರಸ್ಪ
ಧರ್ಮದ ಹೆಸರಿನಲ್ಲಿ ಹೊಡೆದಾಡಲು ಪ್ರಾರಂಭಿಸಿದರು. ಇದು ವಿವೇಕ ರಹಿತವಾದದ್ದು ವಿವೇಚನೆ:- ಭಕ್ತಿ ಯಾವುದಾದರೂ ಮಾಡಿ, ಆದರೆ ಅವರಿಗೆ ಗುರು ಇರಬೇಕಾದದ್ದು ಆವಶ್ಯಕ, ಯಾರು ತಮ್ಮ ಮುಖ ಕಮಲದಿಂದ ತತ್ವಜ್ಞಾನ ಮತ್ತು ಸಾಧನೆಯ ವಿಧಾನವನ್ನು ಹೇಳುತ್ತಾರೋ, ಅವರೇ ಗುರುಗಳು, ಗುರು ಕರೀರದ ಹೆಸರು ಮಾತ್ರವಲ್ಲ ಆ ಶರೀರದಲ್ಲಿ ಯಾವ ಆತ್ಮ ಎದೆಯೋ, ಅವನೇ ಗುರು, ಶರೀರ ಪಂಚ ತತ್ವಗಳಿಂದಾಗಿರಬಹುದು ಅಥವಾ
ಎಲೆಕ್ಟ್ರಾನಿಕ್ (ವೀಡಿಯೋ) ನಿಂದ ಆಗಿರಬಹುದು, ಅವನು ಆ ಸಮಯದ ಗುರು ಎಂದೆನಿಸುತ್ತಾನೆ. ಹಿಂದೂಗಳು ಹೆಚ್ಚಾಗಿ ಗುರುವಿಲ್ಲದೆಯೇ ತಮ್ಮ ಪರಂಪರಾಗತವಾದ ಸಾಧನೆಯನ್ನು ಮಾಡುತ್ತಿರುತ್ತಾರೆ. ಆ ದಾರಿತಪ್ಪಿದ ವಿಧಾನವನ್ನು ಶ್ರೀನಾನಕರು ಪರಮಾತ್ಮನಿಂದ ಪ್ರಾಪ್ತವಾದ ಜ್ಞಾನದಿಂದ ಸರಿಪಡಿಸಿದ್ದಾರೆ. ಇಂದು ಸಿಬ್ಬರಲ್ಲೂ ಸರಿಯಾದ ಗುರುಗಳ ಕೊರತೆ ಇದೆ. ಸೂಕ್ಷ್ಮವೇದದಲ್ಲಿ ಹೇಳಿರುವಂತೆ (ಸೂಕ್ಷ್ಮ ವೇದ ಎಂದರೆ ಏನು ಎಂಬುದನ್ನು ಇದೇ ಪುಸ್ತಕದಿಂದ ತಿಳಿದುಕೊಳ್ಳಿ):-
ರಾಮ್-ಕೃಷ್ಣ ಸೇ ಕೌನ್ ಬಡಾ, ಉನ್ಹೋನೆ ಭೀ ಗುರು ಕೀನ್ |
ತೀನ್ ಲೋಕ್ ಕೇ ವೇ ಧನೀ ಗುರು ಆಗೇ ಆಫೀನ್॥
ಭಾವಾರ್ಥ:- ಯಾವ ಹಿಂದೂ ಭಕ್ತನು ಗುರುವಿಲ್ಲದೆ ತನ್ನ ಮನಸ್ಸಿಗೆ ಬಂದಂತೆ ಆಚರಣೆ ಮಾಡುತ್ತಾನೋ, ಅವನು ಶ್ರೀರಾಮ ಮತ್ತು ಶ್ರೀ ಕೃಷ್ಣನನ್ನೇ ಅಲ್ಲದೆ, ಯಾರನ್ನೂ ದೊಡ್ಡವರೆಂದು ಭಾವಿಸುವುದಿಲ್ಲ. ಮೂರು ಲೋಕದ ಒಡೆಯರಾದರೂ ಸಹ ಅವರು ಗುರುವನ್ನು ಪಡೆದು ಭಕ್ತಿ ಮಾಡುತ್ತಿದ್ದರು ಹಾಗೂ ತಮ್ಮ ತಮ್ಮ ಗುರುಗಳ ಚರಣಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದರು. (ಶ್ರೀ ರಾಮನ ಗುರುಗಳು ವಸಿಷ್ಠರಾಗಿದ್ದರು ಹಾಗೂ ದೂರ್ವಾಸರು ಶ್ರೀಕೃಷ್ಣನ ಗುರುಗಳಾಗಿದ್ದರು. ಸಂದೀಪನಿ ಋಷಿಗಳಂತೂ ಅಕ್ಷರ ಜ್ಞಾನವನ್ನು ನೀಡುವಂಥಾ ಅಧ್ಯಾಪಕರಾಗಿದ್ದರು. ದೂರ್ವಾಸರು ಶ್ರೀಕೃಷ್ಣನ ಅಧ್ಯಾತ್ಮಿಕ ಗುರುಗಳಾಗಿದ್ದರು. ನೀವು ಗುರುವಿಲ್ಲದೆ ನಿಮ್ಮ ಉದ್ಧಾರ ಮಾಡಿಕೊಳ್ಳಲು ಇಚ್ಚಿಸುತ್ತಿರುವಿರಿ, ನಿಮಗೆ ಏನು ಬುನಾದಿ ಇದೆ? ಸೂಕ್ಷ್ಮವೇದದಲ್ಲಿ ಪುನಃ ಹೇಳಲಾಗಿದೆ:-
ಕಬೀರ್, ಗುರು ಬಿನ್ ಮಾಲಾ ಫೇರ್ತೇ, ಗುರು ಬಿನ್ ದೇತೇ ದಾನ್!
ಗುರು ಬಿನ್ ದೋನೋಂ ನಿಷಲ್ ಹೈ, ಭಾವೈಂ ಪೊಲೊ ವೇದ್ ಪುರಾಣ್
Comments
Post a Comment